ಮನದಲ್ಲಿ ತುಂಬಿದೆ ಅಮವಾಸ್ಯೆಯ ಕಗ್ಗತ್ತಲು,
ಎಲ್ಲೆಲ್ಲೂ ಹರಡಿದೆ ಬರಗಾಲದ ಬರಡು.
ಬೆಳಕು ಕಂಗೊಳಿಸುತ್ತಿಲ್ಲ,
ನಾಡಿನ ಅಭಿವೃದ್ಧಿಯಿಲ್ಲ,
ಅಂಧಕಾರವೇ ಇದೆಯಲ್ಲ ಎಲ್ಲೆಲ್ಲೂ!
ಎಲ್ಲೆಲ್ಲೂ ಇದ್ದಾರೆ ಕಪಟ ಜನ,
ಶುದ್ಧವಿಲ್ಲ ಯಾರೊಬ್ಬರ ಮನ,
ಕತ್ತಲೆಯಲ್ಲೆ ಅವರ ಜೀವನ.
ಪೂರ್ಣ ಚಂದ್ರನ ಬೆಳಕು ಚೆಲ್ಲಿ,
ಬಾಳನ್ನು ಬೆಳಗಿಸಿ,
ಉಸಿರು ತುಂಬುವರು ಯಾರು ಇಲ್ಲ.
ಆ ಬೆಳಕ ತರುವುದಾದರೆ-
ಸ್ವಾಗತ ನಿನಗೆ ತಾಯಿಯೇ,
ನಿನ್ನ ಪಾದಗಳಿಗೆ ನಾನು ನಮಿಸುವೆ!
ನೀನು ಒಲಿದರೆ ಸಾಧ್ಯ ಪ್ರಗತಿ,
ಆಗ ಕನ್ನಡಿಗರಿಗೆ ಸದ್ಗತಿ,
ಬಾ ತಾಯಿಯೇ,
ಬೆಳದಿಂಗಳಾಗಿ ಬಾ!!
ಕತ್ತಲನ್ನು ನೀಗಿಸುವ ಆಶಾಕಿರಣ ನಮೆಲ್ಲರ ಮನದ ಅಂಧಕಾರವನ್ನು ಹಿಮ್ಮೆಟ್ಟಿ ಸಮಾಜದ ಮುನ್ನಡೆಗೆಗೆ ನಾಂದಿ ಹಾಡಲಿ ಅಂತ ಪ್ರಾರ್ಥಿಸೋಣ!
ReplyDelete